ಕುರಿತು

ಅರ್ಥಾರ್ಜನೇ ಸಹಾಯಂ ಪುರುಷಾಣಾಮಾಪದರ್ಣವೇ ಪೋತಃ |
ಯಾತ್ರಾಸಮಯೇ ಮಂತ್ರೀ ಜಾತಕಮಪಹಾಯ ನಾಸ್ತ್ಯಪರಃ ||


ಈ ಸಂಸಾರದಲ್ಲಿ ಜಾತಶಾಸ್ತ್ರವನ್ನು ಬಿಟ್ಟು ಮನುಷ್ಯನ ಸಹಾಯಕವಾದದ್ದು ಯಾವುದೂ ಇಲ್ಲ. ಇದು ಅರ್ಥಸಂಗ್ರಹಕ್ಕೆ ಸಹಕಾರಿಯಾಗಿದೆ, ಅಲೆಗಳಂತೆ ಬರುವ ಆಪತ್ತುಗಳೆಂಬ ಸಮುದ್ರದಿಂದ ನಮ್ಮನ್ನು ನಾವೆಯ ಹಾಗೆ ಪಾರುಮಾಡಿಸುತ್ತದೆ, ಜೀವನದ ಯಾತ್ರೆಯಲ್ಲಿ ಆಪ್ತಮಂತ್ರಿಯಯಾಗಿ ಮಾರ್ಗದರ್ಶಕವಾಗಿದೆ. ಇಂಥಹ ಜ್ಯೋತಿಷ್ಯಶಾಸ್ತ್ರರೂಪಿಯಾದ ವಿದ್ಯೆಯಿಂದ ಪ್ರತಿಯೊಬ್ಬರು ಜೀವನದಲ್ಲಿ ಕಷ್ಟಗಳನ್ನು ನಿವಾರಿಸಿಕೊಂಡು ಸುಖ-ಸಂತಷಗಳನ್ನು ಹೊಂದಬಹುದು.

ವೈದಿಕ ಶಾಸ್ತ್ರಗಳು, ಧರ್ಮಶಾಸ್ತ್ರ ಜ್ಯೋತಿಷ್ಯಾದಿ ವಿಷಯಗಳಲ್ಲಿ ಆಸಕ್ತಿ ಮತ್ತು ಅಧ್ಯಯನ. ಗುರುಗಳಿಂದ, ಹಿರಿಯರಿಂದ ಕೇಳಿ ಓದಿ ತಿಳಿದುಕೊಂಡಿರುವ ವಿಚಾರಗಳನ್ನು ಭಾವಿಕರಲ್ಲಿ ವಿನಿಮಯಿಸುವ ಆಸೆ, ಅದಕ್ಕೆ ಈ ಲೇಖನ ಸಂಚಿಕೆ. ಇವತ್ತಿನ ಆಧುನಿಕ ಜೀವನದಲ್ಲಿ ಹೊಸ ಸಮಸ್ಯೆ-ಸವಾಲುಗಳನ್ನು ಎದುರಿಸುತ್ತಿರುವ ನಮಗೆ ಜ್ಯೋತಿಷ್ಯ, ಧರ್ಮಶಾಸ್ತ್ರಗಳೇ ಏಕೈಕ ಮಾರ್ಗದರ್ಶಕಗಳಾಗಿವೆ. ಭಕ್ತಿ ಮತ್ತು ಆಧ್ಯಾತ್ಮ ಇವುಗಳಿಂದಲೇ ಮಾನಸಿಕ ನೆಮ್ಮದಿಯನ್ನು ಲೌಕಿಕ ಏಳ್ಗೆಯನ್ನು ಸಾಧಿಸಬಹುದು. ಇಂದಿನ ಒತ್ತಡಮಯ ಮತ್ತು ಯಾಂತ್ರಿಕ ಜೀವನಶೈಲಿಯಲ್ಲಿ ಜ್ಯೋತಿಷ್ಯ ಒಂದು ವರದಾನವೇ ಸರಿ. ಪ್ರತಿಯೊಬ್ಬರಿಗೂ ತಮ್ಮ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಜ್ಯೋತಿಷ್ಯದ ಮಾರ್ಗದರ್ಶನ ಅಗತ್ಯ.

ಜ್ಯೋತಿಷ್ಯಾದಿ ಶಾಸ್ತ್ರಗಳ ಪ್ರಸಕ್ತ, ಪ್ರಾಯೋಗಿಕ ಉಪಯುಕ್ತತೆಗಳನ್ನು ತೋರಿಸುವುದೇ ಈ ಬ್ಲಾಗ್‍/ವೆಬ್‍ಸೈಟ್‍ನ ಆಶಯ. ಭಾರತೀಯ ಜ್ಯೋತಿಷ್ಯದ ವಿವಿಧ ವಿಷಯಗಳು, ಧಾರ್ಮಿಕ ವೃತ ನಿಯಮಗಳು, ದೋಷ ಪರಿಹಾರೋಪಾಯಗಳು ಹೀಗೆ ಅನೇಕ ಮಾಹಿತಿಗಳ ಆಕರ ಈ ಅಂತರ್ಜಾಲ ತಾಣ. ನಿಮ್ಮ ಸಲಹೆ-ಅಭಿಪ್ರಾಯಗಳಿಗೆ ಸದಾ ಆದರದ ಸ್ವಾಗತ.

Sri Guru Astro
Belgaum

Contact Info: (Coming Soon)

Facebook Pages:
Phalajyotish (Kannada page): http://www.facebook.com/phalajyotish
Sri Guru Astro (Consultancy page): https://www.facebook.com/sriguruastro
—————————

ಸೂಚನೆ –

ಈ ಅಂತರ್ಜಾಲ ತಾಣವು (website/blog) ಕೇವಲ ಮಾಹಿತಿಪರ ಮಾತ್ರ. ಇಲ್ಲಿ ಕೊಡಲಾಗಿರುವ ಎಲ್ಲ ಮಾಹಿತಿಗಳು ಜ್ಯೋತಿಷ್ಯ ಶಾಸ್ತ್ರದ ಕುರಿತಾದ ಕಲಿಕೆಗಾಗಿ/ತಿಳುವಳಿಕೆಗಾಗಿ ಮಾತ್ರ. ಈ ಅಂತರ್ಜಾಲ ತಾಣದಲ್ಲಿ ಇರಬಹುದಾದ ತಪ್ಪುಗಳು, ದೋಷಗಳು ಮತ್ತು ಅಕರಾರುವಾಕ್ಕಾದ ಮಾಹಿತಿಗಳಿಗೆ ಅಥವಾ ವಿಷಯಗಳಿಗೆ ಲೇಖಕರು ಅಥವಾ ಈ ಅಂತರ್ಜಾಲ ತಾಣ ಜವಾಬ್ದಾರವಲ್ಲ. ಈ ಅಂತರ್ಜಾಲ ತಾಣದಿಂದ ಪಡೆದ ಮಾಹಿತಿಯಿಂದಾದ ಯಾವುದೇ ಫಲಿತಾಂಶಗಳಿಗೆ ಮತ್ತು ಪರಿಣಾಮ ಅಥವಾ ಪ್ರಭಾವಗಳಿಗೆ ಈ ಅಂತರ್ಜಾಲ ತಾಣ ಜವಾಬ್ದಾರವಲ್ಲ. ಓದುಗರು ಈ ಅಂತರ್ಜಾಲ ತಾಣದಲ್ಲಿ ಕೊಟ್ಟಿರುವ ಎಲ್ಲ ವಿಷಯಗಳನ್ನು ಅನ್ಯ ಮೂಲಗಳಿಂದ ತಿಳಿದು ಧೃಢೀಕರಿಸಿಕೊಳ್ಳುವುದು ಸೂಕ್ತ.

General Disclaimer –

This website/blog is designed for informational purposes only. The information obtained by the website/blog is intended for educational purposes and to provide users with information about Indian Astrology. This website/blog is not responsible for errors, omissions, or inaccuracies in it or the results obtained from use of the information provided herein. Website/blog users are always encouraged to check and confirm the information with other sources.