ಶ್ರೀನವಗ್ರಹ ಸ್ತೋತ್ರ – ಶ್ರೀವ್ಯಾಸ ವಿರಚಿತ

ಎಲ್ಲ ಧಾರ್ಮಿಕ ಮತ್ತು ಲೌಕಿಕ ಕಾರ್ಯಗಳ ಆರಂಭಿಸುವ ಮುನ್ನ ನವಗ್ರಹಗಳನ್ನು ಅವಶ್ಯವಾಗಿ ಪ್ರಾರ್ಥಿಸಬೇಕು. ಈ ಭೂಮಿಯ ಮೇಲಿನ ಸಮಸ್ತ ಜೀವರಾಶಿಗಳು ನವಗ್ರಹಗಳ ಪ್ರಭಾವಕ್ಕೆ ಒಳಪಟ್ಟಿವೆ. ಮನೋಕಾಮನೆಯ ಸಿದ್ಧಿಗಾಗಿ, ಪ್ರಾರಂಭಿಸಿದ ಕೆಲಸದ ಶೀಘ್ರ ಮತ್ತು ತೃಪ್ತಿಕರ ಸಮಾಪ್ತಿಗಾಗಿ ಗ್ರಹಗಳ ಆರಾಧನೆಯನ್ನು ಮಾಡಲೇಬೇಕು. ಯಾವುದೇ ಕಾರ್ಯ ಆರಂಭಿಸುವ ಮುನ್ನ ನಿರ್ವಿಘ್ನವಾಗಿ ಕಾರ್ಯಸಾಧನೆಗಾಗಿ ಮತ್ತು ಶುಭಫಲ ಪ್ರಾಪ್ತಿಗಾಗಿ ಗಣಪತಿ, ಗುರುಗಳು, ನವಗ್ರಹಗಳು, ಕುಲದೈವ, ಇಷ್ಟದೈವ ಇವರಲ್ಲಿ ಪ್ರಾರ್ಥನೆ ವಿಹಿತವಾಗಿರುತ್ತದೆ.

ಸೂರ್ಯಃ ಸೋಮೋ ಮಹೀಪುತ್ರಃ ಸೋಮಪುತ್ರೋ ಬೃಹಸ್ಪತೀ |
ಶುಕ್ರಃ ಶನೈಶ್ಚರೋ ರಾಹುಃ ಕೇತುಶ್ಚೇತಿ ಗ್ರಹಾಃ ಸ್ಮೃತಾಃ ||
(ಯಾಜ್ಞವಲ್ಕ್ಯ ಸ್ಮೃತಿ ೧೩-೦೨)
ಸೂರ್ಯ, ಚಂದ್ರ, ಭೂಮಿಪುತ್ರನಾದ ಕುಜ, ಚಂದ್ರಪುತ್ರನಾದ ಬುಧ, ಬೃಹಸ್ಪತಿ, ಶುಕ್ರ, ಶನೈಶ್ಚರ, ರಾಹು ಮತ್ತು ಕೇತು ಇವರನ್ನು ಗ್ರಹಗಳೆಂದು ಹೇಳಲಾಗಿದೆ.

ಆಯುಶ್ಚ ವಿದ್ಯಾಂ ಚ ತಥಾ ಸುಖಂ ಚ
ಧರ್ಮಾರ್ಥಕಾಮಾನ್ ಬಹುಪುತ್ರತಾಂ ಚ |
ಶತ್ರುಕ್ಷಯಂ ರಾಜಸು ಪೂಜ್ಯತಾಂ ಚ
ತುಷ್ಟಾ ಗ್ರಹಾಃ ಸರ್ವಮೇತದ್ ದಿಶಂತಿ ||

ಪ್ರಸನ್ನರಾದ ನವಗ್ರಹರು ಆಯುಷ್ಯ, ವಿದ್ಯೆ ಮತ್ತು ಸುಖವನ್ನು ಕೊಡುತ್ತಾರೆ. ಧರ್ಮ-ಅರ್ಥ-ಕಾಮ (ತ್ರಿವರ್ಗ), ಬಹುಸಂತತಿಯನ್ನು ಕೊಡುತ್ತಾರೆ. ಶತ್ರುಗಳನ್ನು ನಾಶಮಾಡುತ್ತಾರೆ. ಅನೇಕ ರಾಜರಿಂದ ಪೂಜ್ಯತ್ವವನ್ನು (ಮರ್ಯಾದೆ) ಸಹ ಪ್ರದಾನ ಮಾಡುತ್ತಾರೆ.

ಗ್ರಹಾಧೀನಂ ಜಗತ್ಸರ್ವಂ ಗ್ರಹಾಧೀನಾ ನರಾವರಾಃ |
ಸೃಷ್ಟಿಸಂರಕ್ಷಣಸಂಹಾರಾಃ ಸರ್ವೇ ಚಾಪಿ ಗ್ರಹಾನುಗಾಃ ||

ಸಮಸ್ತ ಜಗತ್ತು ಗ್ರಹಗಳ ಅಧೀನವಾಗಿದೆ, ಮನುಷ್ಯರು ಮತ್ತು ಇತರ ಜೀವಗಳು ಗ್ರಹಗಳ ಅಧೀನರೇ ಆಗಿರುತ್ತಾರೆ. ಸೃಷ್ಟಿ-ಪಾಲನೆ-ಸಂಹಾರ ಎಲ್ಲವೂ ಗ್ರಹಗಳ ಅನುಗಾಮಿಯೇ (ಗ್ರಹಸೂಚಿತವೇ) ಆಗಿವೆ.

ಆದ್ದರಿಂದ ನಮ್ಮ ಕಲ್ಯಾಣಕ್ಕಾಗಿ ಸರ್ವ ನಿಯಂತ್ರಕರಾದ ಗ್ರಹಗಳನ್ನು ನಾವು ಪ್ರತಿನಿತ್ಯ ಪ್ರಾರ್ಥಿಸಬೇಕು. ನವಗ್ರಹಗಳ ಪ್ರಸಾದವು ಇಹಪರಗಳಲ್ಲಿ ನಮಗೆ ಸುಖ-ಶಾಂತಿಗಳನ್ನು ತಂದುಕೊಡುತ್ತದೆ. ಪ್ರಸಕ್ತ ಪ್ರಕಟಿಸುತ್ತಿರುವ ನವಗ್ರಹ ಸ್ತೋತ್ರವು ಸುಪ್ರಸಿದ್ಧವಾದದ್ದು. ಭಗವಾನ್ ವೇದವ್ಯಾಸರಿಂದ ರಚಿತವಾದ ಈ ಸ್ತೋತ್ರವು ಶೀಘ್ರಫಲಪ್ರದವಾಗಿದೆ ಅತ್ಯಂತ ಪ್ರಭಾವಶಾಲಿಯಾಗಿದೆ. ಈ ಸ್ತೋತ್ರದಲ್ಲಿರುವ ಆಯಾ ಗ್ರಹಕ್ಕೆ ಸಂಬಂಧಿಸಿರುವ ಶ್ಲೋಕಗಳನ್ನು ಗ್ರಹಶಾಂತಿಗಾಗಿ ಜಪ ಮಾಡಬಹುದು. ಸ್ತೋತ್ರದಲ್ಲಿ ಪಾರಾಯಣದ ಫಲವನ್ನು ಕೊಡಲಾಗಿದೆ –

ಇತಿ ವ್ಯಾಸಮುಖೋದ್ಗೀತಂ ಯಃ ಪಠೇತ್ಸುಸಮಾಹಿತಃ |
ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ||

ಭಗವಾನ್ ವ್ಯಾಸರಿಂದ ರಚಿಸಲಾದ ಈ ಸ್ತೋತ್ರವನ್ನು ಯಾರು ಧ್ಯಾನಪೂರ್ವಕವಾಗಿ ಹಗಲಾಗಲಿ ಅಥವಾ ರಾತ್ರಿ(ಸಾಯಂ)ಯಲ್ಲಾಗಲಿ ಪಠನ ಮಾಡುವರೋ ಅವರಿಗೆ ಒದಗಿರುವ ಎಲ್ಲ ವಿಘ್ನಗಳು (ಕಷ್ಟ-ವಿಪತ್ತುಗಳು) ಶಾಂತವಾಗುತ್ತವೆ (ನಿವಾರಣೆಯಾಗುತ್ತವೆ).
ನರನಾರೀ-ನೃಪಾಣಾಂ ಚ ಭವೆದ್ದುಃಸ್ವಪ್ನನಾಶನಂ |
ಐಶ್ವರ್ಯಮತುಲಂ ತೇಷಾಮಾರೋಗ್ಯಂ ಪುಷ್ಟಿವರ್ಧನಮ್ ||

ಈ ಸ್ತೋತ್ರಪಠನದಿಂದ ದುಃಸ್ವಪ್ನಗಳು ಅಥವಾ ಸ್ವಪ್ನಸೂಚಿತ ಅನಿಷ್ಟಗಳು ನಾಶವಾಗುತ್ತವೆ. ಅತುಲವಾದ ಐಶ್ವರ್ಯ, ಆರೋಗ್ಯಗಳು ಅಭಿವೃದ್ಧಿಯಾಗುವವು.
ಗೃಹನಕ್ಷತ್ರಜಾಃ ಪೀಡಾಃ ತಸ್ಕರಾಗ್ನಿ ಸಮುದ್ಭವಾಃ |
ತಾಃ ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ ಬ್ರೂತೇ ನ ಸಂಶಯಃ ||

ಗ್ರಹನಕ್ಷತ್ರಗಳಿಂದುಂಟಾದ ಪೀಡೆ, ಕಳ್ಳರ ಭಯ, ಅಗ್ನಿಯ ಭಯ ಎಲ್ಲವೂ ಶಾಂತವಾಗುತ್ತವೆ, ಇದು ವ್ಯಾಸರ ವಚನವಾಗಿದೆ, ಇದಕ್ಕೆ ಯಾವುದೇ ಸಂಶಯವಿಲ್ಲ.

ಗ್ರಹ ನಿಮಿತ್ತವಾಗಿ ಪೀಡೆ ಸೂಚಿತವಾದಾಗ ಗ್ರಹಶಾಂತಿಗಾಗಿ ಸ್ತೋತ್ರದ ಆಯಾ ಗ್ರಹಕ್ಕೆ ಸಂಬಂಧಿಸಿದ ಶ್ಲೋಕವನ್ನು ಜಪಿಸಬಹುದು. ಜಪಿಸಬೇಕಾದ ಜಪಸಂಖ್ಯೆ –
ಸೂರ್ಯ – 7000, ಚಂದ್ರ – 11000, ಕುಜ (ಮಂಗಳ) – 10000, ಬುಧ – 4000, ಗುರು (ಬೃಹಸ್ಪತಿ) – 19000, ಶುಕ್ರ – 16000, ಶನಿ – 23000, ರಾಹು – 18000, ಕೇತು – 17000.
(ವಾಚಕರ ಸೌಲಭ್ಯಕ್ಕಾಗಿ ಈ ಸ್ತೋತ್ರದ ಪಿಡಿಎಫ಼್ ಆವೃತ್ತಿಯನ್ನು ಕೊಡಲಾಗಿದೆ.)


ಶ್ರೀವ್ಯಾಸ ವಿರಚಿತಂ ನವಗ್ರಹ ಸ್ತೊತ್ರಮ್

ಶ್ರೀಗಣೇಶಾಯನಮಃ ||
ಅಸ್ಯ ಶ್ರೀನವಗ್ರಹಸ್ತೋತ್ರಮಂತ್ರಸ್ಯ ವೇದವ್ಯಾಸ ಋಷಿಃ | ಅನುಷ್ಟುಪ್ ಛಂದಃ |
ಮಮ ಗ್ರಹಾನುಕೂಲ್ಯಾರ್ಥೇ ನವಗ್ರಹಸ್ತೋತ್ರ ಜಪೇ (ಪಾರಾಯಣೇ) ವಿನಿಯೋಗಃ ||

ಜಪಾಕುಸುಮ-ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ |
ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ || ೧ || (ಸೂರ್ಯ)

ದಧಿ-ಶಂಖ-ತುಷಾರಾಭಂ ಕ್ಷೀರೋದಾರ್ಣವ-ಸಂಭವಂ |
ನಮಾಮಿ ಶಶಿನಂ ಸೋಮಂ ಶಂಭೊರ್ಮುಕುಟ-ಭೂಷಣಮ್ || ೨ || (ಚಂದ್ರ)

ಧರಣೀಗರ್ಭ-ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಂ |
ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ || ೩ || (ಕುಜ-ಮಂಗಳ)

ಪ್ರಿಯಂಗು-ಕಲಿಕಾ-ಶ್ಯಾಮಂ ರೂಪೇಣಾಪ್ರತಿಮಂ ಬುಧಂ |
ಸೌಮ್ಯಂ ಸೌಮ್ಯ-ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ || ೪ || (ಬುಧ)

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನ-ಸನ್ನಿಭಂ |
ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ || ೫ || (ಗುರು-ಬೃಹಸ್ಪತಿ)

ಹಿಮಕುಂದ-ಮೃಣಾಲಾಭಮ್ ದೈತ್ಯಾನಾಂ ಪರಮಂ ಗುರುಂ |
ಸರ್ವಶಾಸ್ತ್ರ-ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ || ೬ || (ಶುಕ್ರ)

ನೀಲಾಂಜನ-ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾ-ಮಾರ್ತಾಂಡ-ಸಂಭೂತಂ ತಂ ನಮಾಮಿ ಶನೈಶ್ಚರಮ್ || ೭ || (ಶನಿ)

ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ-ವಿಮರ್ದನಂ |
ಸಿಂಹಿಕಾ-ಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ || ೮ || (ರಾಹು)

ಪಲಾಶ-ಪುಷ್ಪ-ಸಂಕಾಶಂ ತಾರಕಾಗ್ರಹ-ಮಸ್ತಕಂ |
ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್ || ೯ || (ಕೇತು)

ಇತಿ ವ್ಯಾಸಮುಖೋದ್-ಗೀತಂ ಯಃ ಪಠೇತ್-ಸುಸಮಾಹಿತಃ |
ದಿವಾ ವಾ ಯದಿ ವಾ ರಾತ್ರೌ ವಿಘ್ನ-ಶಾಂತಿರ್ಭವಿಷ್ಯತಿ || ೧೦ ||

ನರನಾರೀ-ನೃಪಾಣಾಂ ಚ ಭವೆದ್ದುಃಸ್ವಪ್ನನಾಶನಂ |
ಐಶ್ವರ್ಯಮತುಲಂ ತೇಷಾಮಾರೋಗ್ಯಂ ಪುಷ್ಟಿವರ್ಧನಮ್ || ೧೧ ||

ಗೃಹನಕ್ಷತ್ರಜಾಃ ಪೀಡಾಃ ತಸ್ಕರಾಗ್ನಿ ಸಮುದ್ಭವಾಃ |
ತಾಃ ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ ಬ್ರೂತೇ ನ ಸಂಶಯಃ || ೧೨ ||

|| ಇತಿ ಶ್ರೀವ್ಯಾಸವಿರಚಿತ ನವಗ್ರಹಸ್ತೋತ್ರಂ ಸಂಪೂರ್ಣಮ್ ||

ಪಿಡಿಎಫ಼್ ಆವೃತ್ತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆಗಳು.